FAQs - BTP Bangalore Kannada - FAQs
BTP - Header
BTP - Left Panel
ನಮ್ಮ ವಿಳಾಸ
ಸಂಚಾರ ಪೂರ್ವ ವಿಭಾಗ
ಸಂಚಾರ ಪಶ್ಚಿಮ ವಿಭಾಗ
ಇತರೆ ಸಂಚಾರ ವೆಬ್ ಸೈಟಗಳ ಬಗ್ಗೆ ಮಾಹಿತಿ
ಸಂಚಾರ ಸಹಾಯವಾಣೆ ಸಂಖ್ಯೆಗಳು
ಉಚಿತ ಕರೆ - ೧೦೯೫
೦೮೦ - ೨೨೯೪೩೦೩೦ / ೩೧೩೧
ಋಗ್ಣ ವಾಹನ (ಅಂಬ್ಯುಲೆನ್ಸ್)
ಉಚಿತ ಕರೆ - ೧೦೫೭೧೧
ಉಚಿತ ಕರೆ - ೧೦೮ / ೧೦೬೨
ಪದೇ ಪದೇ ಕೇಳಲಾದ ಪಶ್ನೆಗಳು
ಚಾಲಕನು ತನ್ನ ವಾಹನವನ್ನು ಚಾಲನೆ ಮಾಡುವಾಗ ಅವನ ಬಳಿ ಯಾವ ದಾಖಲಾತಿಗಳನು ಇಟ್ಟುಕೊಳ್ಳಬೇಕು ?
    • ಚಾಲನ ಪರವಾನಿಗೆ/ನೋಂದಾಯಿತ ಪತ್ರಗಳು
    • ತೆರಿಗೆ ಪ್ರಯಾಣಪತ್ರ
    • ವಾಯುಮಾಲಿನ್ಯ ಪರೀಕ್ಷಣಾ ಪತ್ರ
    • ವಿಮಾ ದಾಖಲಾತಿ ಪತ್ರ
    • ಸದೃಡತೆ ಸರ್ಟಿಫಿಕೇಟ್ & ಅನುಮತಿ ಪತ್ರ (ಅದು ಸಾರಿಗೆ ವಾಹನವಾಗಿದ್ದಲ್ಲಿ)
ಸ್ಥಳದಲ್ಲಿ ಸಂಚಾರದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಯಾರಿಗೆ ನೀಡಲಾಗಿದೆ?
ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಸಭ್ ಇನ್ಸ್‌ಪೆಕ್ಟರ್ ಮಟ್ಟದ ಹಾಗೂ ಅದಕ್ಕಿಂತ ಹೆಚ್ಚಿನ ಅಧಿಕಾರವುಳ್ಳ ಅಧಿಕಾರಿಗಳಿಗೆ ಹಣ ಪಡೆದು ರಸೀತಿ ನೀಡುವ ಅಧಿಕಾರವನ್ನು ನೀಡಲಾಗಿದೆ.

ನನ್ನಲ್ಲಿ ದಂಡ ತೆರಲು ಹಣವಿಲ್ಲದಿದ್ದರೆ, ಎನು ಮಾಡಬೇಕು?
ಸೆಕ್ಟನ್ ೨೦೬(೨) ಎಂ.ವಿ ಅಕ್ಟ್ , ೧೯೮೮ ರ ಪ್ರಕಾರ , ನೀವು ದಂಡದ ಹಣವನ್ನು ಸ್ಥಳದಲ್ಲಿ ತೆರಲು ಸಾಧ್ಯವಿರದ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಯು ನಿಮ್ಮಲ್ಲಿರುವ ಅಸಲಿ ಚಲನಾ ಪತ್ರವನ್ನು ಅತನ ವಶಕ್ಕೆ ತೆಗೆದುಕೊಂಡು, ಒಂದು ವಾರದೊಳಗಾಗಿ ಸೂಚಿಸಿದ ನ್ಯಾಯಾಲದ ಮುಂದೆ ಹಾಜರಾಗುವಂತೆ ತಿಳಿಸಿ ಸೂಚನಾ ಪತ್ರವನ್ನು ನೀಡುತ್ತಾರೆ.

ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಕೇಂದ್ರದಿಂದ ನಾನು ಸೂಚನಾ ಪತ್ರ ಪಡೆದಿದ್ದೇನೆ? ಇದನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ? ನೀವು ಎನ್‌ಪೋರ್ಸ್‌ಮೆಂಟ್ ಅಟೋಮೇಷನ್ ಸೆಂಟರ್, ನಂ. ೫, ಸಂಚಾರ ಕೇಂದ್ರ ಸ್ಥಾನ, ೫ ನೇ ಮಹಡಿ, ಇನ್ ಫ಼್ಯಾನ್ ಟ್ರಿ ರಸ್ತೆ, ಬೆಂಗಳೂರು ಅಥವಾ ಬೆಂಗಳೂರು ನಗರದಲ್ಲಿರುವ ಯಾವುದೇ ೪೨ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಬಹುದು. ಅಲ್ಲದೆ ಬೆಂಗಳೂರು-ಒನ್ ಕೇಂದ್ರಗಳಲ್ಲಿಯೂ ಸಹ ಸೂಚನಾ ಪತ್ರದಲ್ಲಿರುವ ದಂಡದ ಹಣವನ್ನು ಪಾವತಿಸಿ ರಸೀತಿ ಪಡೆಯಬಹುದು.

ಅಸನ ಪಟ್ಟಿಯ ಬಗ್ಗೆ ನಿಯಮಗಳೇನು?
ಸೆಕ್ಷನ್ ೧೩೮ ಸಿ‌ಎಂವಿ‌ಆರ್ ರಿ/ವಿ ೧೭೭ ಎಂವಿ‌ಅಕ್ಟ್ ರ ಪ್ರಕಾರ ವಾಹನವನ್ನು ಚಲಿಸುವಾಗ ಚಾಲಕ ಮತ್ತು ಅತನ ಪಕ್ಕದಲ್ಲಿ ಮುಂಭಾಗ ಅಸನದಲ್ಲಿ ಕುಳಿತಿರುವ ವ್ಯಕ್ತಿಗಳು ಅಸನ ಪಟ್ಟಿಯನ್ನು ತೊಟ್ಟುಕೊಳ್ಳಬೇಕು.

ಚಾಲಕ ವಾಹನ ಓಡಿಸುವಾಗ ಮೊಬೈಲ್‌ಪೋನ್‌ನಲ್ಲಿ ಮಾತನಾಡಬಹುದೇ?
ಸೆಕ್ಷನ್ ೨೫೦(ಎ) ಎಂಎಂವಿ‌ಆರ್, ರಿ/ವಿ ೧೭೭ ಎಂ.ವಿ.ಅಕ್ಟ್, ರ ಪ್ರಕಾರ ಚಾಲಕನು ವಾಹನವನು ಚಾಲನೆ ಮಾಡುವಾಗ ಅಥವಾ ಮೋಟಾರ್‌ಸೈಕಲ್‌ನ್ನು ಓಡಿಸುವಾಗ ಮೊಬೈಲ್ ಪೋನ್‌ನ್ನು ಬಳಸುವಂತಿಲ್ಲ.

ಚಾಲಕನ ಹೊರೆತು ವಾಹನದಲ್ಲಿ ಪ್ರಯಾಣಿಸುವ ಇತರರು ಮೊಬೈಲ್‌ನ್ನು ಬಳಸಬಹುದೇ ?
ಹೌದು, ಚಾಲಕನ ಹೊರೆತು ವಾಹನದಲ್ಲಿ ಪ್ರಯಾಣಿಸುವ ಇತರರು ಮೊಬೈಲ್‌ನ್ನು ಬಳಸಬಹುದು.

ನಾನೊಬ್ಬ ವೈಧ್ಯನಾಗಿ, ವಾಹನ ಚಲಾಯಿಸುತ್ತಿರುವಾಗ ತುರ್ತು ಕರೆ ಬಂದರೆ ಅ ಕರೆಯನ್ನು ಸ್ವೀಕರಿಸಬಹುದೇ ?
ಇಲ್ಲಾ, ಮೋಟಾರ್ ವಾಹನ ಕಾಯಿದೆಯಡಿಯಲ್ಲಿ ಯಾರೊಬ್ಬರಿಗೂ ಕೂಡ ಈ ನಿಯಮಗಳಿಂದ ವಿನಾಯಿತಿ ನೀಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಾವು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಂತರ ಕರೆಯನ್ನು ಸ್ವೀಕರಿಸಬಹುದು.

ತಾನು ಚಾಲನೆ ಮಾಡುತ್ತಿರುವ ವಾಹನವು, ಸಾವು/ತೀವ್ರ ಸ್ವರೂಪದ ಗಾಯ/ಅಸ್ತಿಗೆ ದಕ್ಕೆ ಮುಂತಾದ ಘಟನೆಗಳಿಗೆ ತುತ್ತಾದಾಗ ಅದನ್ನು ಚಾಲನೆ ಮಾಡುತ್ತಿದ್ದ ಚಾಲಕನ ಕರ್ತವ್ಯಗಳೇನು ?
ಕರ್ತವ್ಯಗಳು ಈ ರೀತಿ ಇರುತ್ತವೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಬೇಕು, ಒಂದು ವೇಳೆ ವಾಹನವು ಪೆಟ್ರೋಲ್ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದರೆ, ಯಾರೂ ಅ ವಾಹನದ ಬಳಿ ಸುಳಿಯದಂತೆ ನೋಡಿಕೊಳ್ಳಬೇಕು. ಸ್ಥಳದ ಬಳಿ ಸಿಗರೇಟ್ ಸೇದದಂತೆ ಎಚ್ಚರಿಕೆ ವಹಿಸಬೇಕು ಮತ್ತು ವಾಹನದಲ್ಲಿ ಪ್ರಚಾರ ಪಡಿಸಿರುವ ಸುರಕ್ಷತಾ ನಿಯಮಗಳನ್ನು ತುರ್ತಾಗಿ ಪಾಲಿಸಬೇಕು.

ಎಂತಹ ಸಂದರ್ಬಗಳಲ್ಲಿ ಟೋಯಿಂಗ್ ವಾಹನವನ್ನು ಬಳಸಲಾಗುತ್ತದೆ ?
ಯಾವುದೇ ವ್ಯಕ್ತಿ ಸರಿಯಾದ ಕ್ರಮದಲ್ಲಿ ತನ್ನ ವಾಹನವನ್ನು ನಿಲ್ಲಿಸದೇ ಬಿಟ್ಟು ಹೋಗಿರುವ ಸಂದರ್ಬ, ವಾಹನದ ಬಗ್ಗೆ ಎಚ್ಚರಿಕೆ ವಹಿಸಲು ಯಾವುದೇ ವ್ಯಕ್ತಿ ಸ್ಥಳದಲ್ಲಿ ಇಲ್ಲದೇ ಇರುವುದು, ನಿಷೇಧಿಸಲ್ಪಟ್ಟ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸಿರುವುದು ಇಲ್ಲವೇ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತಿದ್ದಂತಹ ಸಂದರ್ಬಗಳಲ್ಲಿ ಅ ವಾಹನವನ್ನು ಟೋಯಿಂಗ್ ವಾಹನ ಬಳೆಸಿ ಬೇರೆಡೆ ಸ್ಥಳಾಂತರಿಸಲಾಗುವುದು.

ಕುಡಿದು ವಾಹನ ಓಡಿಸಿದರೆ ಇಲ್ಲವೇ ಮಾದಕ ವಸ್ತುಗಳನ್ನು ಸೇವಿಸಿ ಅದರ ಪ್ರಭಾವದಿಂದ ವಾಹನ ಓಡಿಸಿದರೆ ಕಾನೂನಿನಲ್ಲಿ ಯಾವ ಶಿಕ್ಷೆ ಇದೆ?
ಮಧ್ಯಸೇವಿಸಿ ವಾಹನವನ್ನು ಓಡಿಸುತ್ತಿರುವಾಗ ಚಾಲಕನನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿದಾಗ ಅವನ ರಕ್ತದಲ್ಲಿ ಅಲ್ಕೋಹಾಲ್ ಅಂಶವಿರುವುದು ದೃಡಪಟ್ಟರೆ ಅಥವಾ ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗಿ ವಾಹನ ಓಡಿಸುತ್ತಿದ್ದು, ಮಾದಕ ವಸ್ತುವಿನ ಪ್ರಭಾವದಿಂದ ವಾಹನದ ಮೇಲೆ ಸರಿಯಾದ ನಿಯಂತ್ರಣ ಸಾಧ್ಯವಾಗದಿದ್ದಂತಹ ಸಂದರ್ಬದಲ್ಲಿ ಇಂತಹ ಚಾಲಕನ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮೊದಲನೇ ಅಪರಾಧಕ್ಕೆ ೬ ತಿಂಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ರೂ.೨,೦೦೦ ವರೆಗೆ ದಂಡ ಅಥವಾ ಎರಡು, ಎರಡನೇ ಅಪರಾಧಕ್ಕೆ ೨ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ರೂ.೩,೦೦೦ ವರೆಗೆ ದಂಡ ಅಥವಾ ಎರಡು,

ಅಧಿಕಾರಿಗಳು ಯಾವಾಗ ಒಂದು ವಾಹನವನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ ?
ಈ ಕೆಳಕಂಡ ದಾಖಲಾತಿಗಳನ್ನು ಹಾಜರು ಪಡಿಸದಿದ್ದಲ್ಲಿ ಅಧಿಕಾರಿಗಳು ಒಂದು ವಾಹನವನ್ನು ವಶಕ್ಕೆ ಪಡೆಯಬಹುದು. ೧) ವಾಯಿದೆ ಇರದಿರುವ ಚಾಲನಾಪತ್ರ , ೨)ವಾಹನ ನೋಂದಣಿ ಪತ್ರ, ೩)ಪರವಾನಗಿ ಇಲ್ಲದಿರುವ ಸರಕು ಸಾಗಾಣೆ ವಾಹನ ಹಾಗೂ ೪) ತೆರಿಗೆ ಕಟ್ಟದಿರುವ ವಾಹನಗಳನ್ನು, ಮೋಟಾರು ವಾಹನ ಕಾಯ್ದೆ ೨೦೭ ರ ಪ್ರಕಾರ ವಶಕ್ಕೆ ಪಡೆಯಲು ಅಧಿಕಾರವಿದೆ.

ಅಧಿಕೃತ ಚಾಲನ ಪತ್ರವಿಲ್ಲದೆ ವಾಹನ ಚಲಾಯಿಸಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ?
ರೂ.೩೦೦/-ಗಳ ದಂಡ ತೆರಬೇಕಾಗುತ್ತದೆ.

ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಓಡಿಸುವಾಗ ಸವಾರರು ಶಿರಸ್ತ್ರಾಣ ಧರಿಸುವುದು ಕಡ್ಡಾಯವೇ? ಹೌದು, ಶಿರಸ್ತ್ರಾಣ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸಿದವರಿಗೆ ಸೆಕ್ಷನ್ ೧೭೭ ಎಂ.ವಿ.ಅಕ್ಟ್-೧೯೮೮ ರ ಪ್ರಕಾರ ರೂ.೧೦೦/- ದಂಡ ವಿಧಿಸಲಾಗುತ್ತದೆ.

ಮಾದಕ ಪಾನೀಯಗಳನ್ನು ಕುಡಿದು ವಾಹನ ಓಡಿಸಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ?
ಕುಡಿದು ವಾಹನ ಓಡಿಸುವಾಗ ನಿಮ್ಮನ್ನು ಅಧಿಕಾರಿಗಳು ಹಿಡಿದರೆ ನಿಮ್ಮಗೆ ನೀವು ಕುಡಿದು ವಾಹನ ಚಲಾಯಿಸ ಬಗ್ಗೆ ಕೋರ್ಟ್‌ಗೆ ಹಾಜರಾಗಿ ಸಮಜಾಯಿಸಿ ನೀಡಲು ನೋಟಿಸ್ ನೀಡಲಾಗುವುದು. ಈ ಕೇಸಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ದಂಡವನ್ನು ಸ್ವೀಕರಿಸುವುದಿಲ್ಲ. ನಿಮ್ಮ ಜೊತೆ ಕುಡಿಯದೇ, ಚಲನಾ ಪರವಾನಿಗೆ ಹೊಂದಿರುವ ಜೊತೆಗಾರ ಇರದ ಹೊರೆತು ನಿಮ್ಮನ್ನು ಮತ್ತೆ ಚಾಲನೆ ಮಾಡಿಕೊಂಡು ಹೋಗಲು ಅವಕಾಶ ನೀಡುವುದಿಲ್ಲ.

ಅಥವಾ

ನೀವು ಕೋರ್ಟಿಗೆ ಹಾಜರಾಗಿ ದಂಡವನ್ನು ಕಟ್ಟುವವರಿಗೂ ನಿಮ್ಮ ವಾಹನವನ್ನು ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋಗಲು ಸಲಹೆ ನೀಡಲಾಗುವುದು. ಕೋರ್ಟಿನಲ್ಲಿ ದಾವೆ ಮುಗಿಯುವವರೆಗೂ ನಿಮ್ಮ ಚಾಲನ ಪರವಾನಿಗೆ ಪತ್ರವನ್ನು ಪೊಲೀಸ್ ಠಾಣೆಯಲ್ಲಿ ಇಟ್ಟು ಕೊಳ್ಳಲಾಗುವುದು.

ನೀವು ಮತ್ತೆ ಇದೇ ರೀತಿಯ ತಪ್ಪನು ಮತ್ತೆ ಮಾಡಿದರೆ, ಅಪರಾಧವನ್ನು ಪುನರಾವರ್ತನೆ ಮಾಡಿದಕ್ಕಾಗಿ ನ್ಯಾಯಲವು ನಿಮ್ಮಗೆ ದಂಡ ಮತ್ತು ಶಿಕ್ಷೆ ಎರಡನ್ನು ವಿಧಿಸುತ್ತದೆ. ಒಂದು ವೇಳೆ ಇಂತಹ ಚಾಲನೆಯಿಂದ ವ್ಯಕ್ತಿ ಮರಣ ಹೊಂದಿದರೆ ನಿಮ್ಮ ಮೇಲೆ ಜಾಮೀನು ರಹಿತ ಉದ್ದೇಶರಹಿತಿ ಕೊಲೆ ಮೊಕದ್ದಮೆ ( ಕಲ್ಪೆಬಲ್ ಹೋಮಿಸೈಡ್) ಹೂಡಲಾಗುವುದು.

Goto   Next Page >
 


ಬೆಂಗಳೂರು ನಗರ ಸಂಚಾರ ಆರಕ್ಷಕರು. © ೨೦೧೬ ಹಕ್ಕು ಕಾಯ್ದಿರಿಸಿದೆ( ಆಲ್ ರೈಟ್ಸ್). ನಿರ್ವಹಣೆ : ಥೀಮ್ಯಾಟಿಕ್ಸ್ ಐಟಿ ಸಲ್ಯೂಷನ್ಸ್ ಪ್ರೈ. ಲಿ.