Bangalore Traffic - BTP Bangalore Kannada - Bangalore Traffic
BTP - Header
BTP - Left Panel
ನಮ್ಮ ವಿಳಾಸ
ಸಂಚಾರ ಪೂರ್ವ ವಿಭಾಗ
ಸಂಚಾರ ಪಶ್ಚಿಮ ವಿಭಾಗ
ಇತರೆ ಸಂಚಾರ ವೆಬ್ ಸೈಟಗಳ ಬಗ್ಗೆ ಮಾಹಿತಿ
ಸಂಚಾರ ಸಹಾಯವಾಣೆ ಸಂಖ್ಯೆಗಳು
ಉಚಿತ ಕರೆ - ೧೦೩
೦೮೦ - ೨೨೯೪೩೦೩೦ / ೩೧೩೧
ಋಗ್ಣ ವಾಹನ (ಅಂಬ್ಯುಲೆನ್ಸ್)
ಉಚಿತ ಕರೆ - ೧೦೫೭೧೧
ಉಚಿತ ಕರೆ - ೧೦೮ / ೧೦೬೨
ತುರ್ತುಸೇವೆ ದೂರವಾಣಿ ಸಂಖ್ಯೆ
ಬೆಂಗಳೂರು ಸಂಚಾರ
ಬೆಂಗಳೂರು ನಗರ ಮತ್ತು ಸಂಚಾರ

ಇಡೀ ದೇಶದಲ್ಲೇ ಬೆಂಗಳೂರು ನಗರವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಐಟಿ ಇಂಡಸ್ಟ್ರೀಸ್‌ಯಲ್ಲಿನ ತೀವ್ರ ಬೆಳವಣಿಗೆಯಿಂದ ಈ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ. ಇದರಿಂದಾಗಿ ಈ ನಗರz ಜನಸಂಖ್ಯೆಯಲ್ಲಿ ಒಂದೇ ಸಮನೇ ಹೆಚ್ಚಳವಾಗುತ್ತಿದೆ. ಇದಕ್ಕೆ ಅನುಗುಣವಾಗಿ ಜನರ ವ್ಯವಹಾರದ ಚಟುವಟಿಕೆಗಳಲ್ಲಿ ವೃಧ್ದಿಯಾಗುತ್ತಿದ್ದು, ಇದರ ಪರಿಣಾಮ ವಾಹನಗಳು ಅಧಿಕಗೊಳ್ಳುತ್ತಿದ್ದು, ಭೂಮಿಯ ಬಗ್ಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಬೆಂಗಳೂರು ನಗರದ ಸಂಚಾರ ಒತ್ತಡವನ್ನು ಕಡಿಮೇ ಮಾಡಲು ಬಹಳಷ್ಟು ಒತ್ತು ನೀಡಲಾಗಿದೆ. ವಿಶೇಷವಾಗಿ ರಸ್ತೆಗಳನ್ನು ವಿಸ್ತುರಿಸುವುದಕ್ಕಿಂತ ಇರುವ ರಸ್ತೆಗಳನ್ನೇ ಉಪಯೋಗಿಸಿ ಒತ್ತಡ ಕಡಿಮೇ ಮಾಡಬೇಕೆಂದು ಅಭಿಪ್ರಾಯ ಕೇಳಿ ಬರುತ್ತಿದೆ. ಅದಾಗ್ಯೂ ಉತ್ತಮ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲು ಸರ್ಕಾರ ಕಾಯಿದೆಯನ್ನು ಜಾರಿಗೊಳಿಸಬೇಕು. ಸರ್ಕಾರ ಮತ್ತು ಬಿಬಿ‌ಎಂಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ., ಪರಿಸ್ಥಿತಿಯನ್ನು ಗಂಭೀರತೆಯನ್ನು ಅರಿತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ.

ಬೆಂಗಳೂರು ನಗರ ಸಂಚಾರದ ಒಂದು ನೋಟ - ಸಂಖ್ಯಾ ಹೇಳಿಕೆ!

ಬೆಂಗಳೂರು ನಗರದಲ್ಲಿ ಒಂದೇ ಸಮನೇ ತಲೆ ಎತ್ತುತ್ತಿರುವ ಐಟಿ ಕಂಪನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳ ತೀವ್ರ ಬೆಳವಣಿಗೆಯಿಂದ ವಾಹನಗಳ ಸಂಖ್ಯೆ ೧.೫ ಮಿಲಿಯನ್‌ಗೂ ಅಧಿಕಗೊಂಡಿದ್ದು, ವಾರ್ಷಿಕ ೭-೧೦% ರಷ್ಟು ಅಧಿಕಗೊಳ್ಳುತ್ತಿದೆ. ನಗರವು ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ಬೆಳದಂತೆಲ್ಲಾ, ಸಮಸ್ಯೆಗಳ ಸರಮಾಲಯೇ ಉದ್ಭವವಾಗುತ್ತದೆ. ಕಾರ್ ಮತ್ತು ದ್ವಿಚಕ್ರ ವಾಹನಗಳನ್ನು ಸ್ವಂತ ಓಡಾಟಕ್ಕೆ ಬಳಸುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂz ಸುಮಾರು ಶೇಕಡ ೯೦% ರಷ್ಟು ನೊಂದಾಯಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು ವಾಹನಗಳ ಸಾಂದ್ರತೆಯಲ್ಲಿ ದ್ವಿಚಕ್ರವಾಹನಗಳ ಸಂಖ್ಯೆಯೇ ಶೇಕಡ ೭೦% ರಷ್ಟಿದ್ದು, ಕಾರ್ ಶೇಕಡ ೧೫% ರಷ್ಟು, ಅಟೋರಿಕ್ಷಾಗಳ ಸಂಖ್ಯೆ ೪%ರಷ್ಟು ಹಾಗೂ ಉಳಿದ ವಾಹನಗಳಾದ ಬಸ್, ವಾನ್ ಮತ್ತು ಟೆಂಪೋಗಳ ಸಂಖ್ಯೆ ಶೇಕಡ ೮% ರಷ್ಟಿರುತ್ತದೆ.

ಸಂಚಾರ ಬೆಳವಣಿಗೆಯ ಪರಿಣಾಮ

• ಎಲ್ಲಾ ಅಥವಾ ಬಹಳಷ್ಟು ರಸ್ತೆಗಳ ಮೇಲೆ ಅವುಗಳ ಸಾಮಾರ್ಥ್ಯಕ್ಕಿಂತ ಮೀರಿದ ಒತ್ತಡವುಂಟಾಗಿದೆ : ಸಾಮಾರ್ಥ್ಯದ ಅಂತರ ೧:೨, ೧:೩ ಮತ್ತು ೧:೫

ಕ್ರಮ ಸಂಖ್ಯೆ. ರಸ್ತೆಯ ಹೆಸರು ವಿ/ಸಿ ಅನುಪಾತ
೧. ನೃಪತುಂಗ ರಸ್ತೆ ೩:೬೨
೨. ಡಿಸ್ಟಿಕ್ ಕಛೇರಿ ರಸ್ತೆ ೨:೫೧
೩. ಕೆ.ಜಿ.ರಸ್ತೆ ೨:೫೧
೪. ಲಾಲ್‌ಬಾಗ್ ಪೋರ್ಟ್ ರಸ್ತೆ ೨:೬೭
೫. ಪುಟ್ಟಣ್ಣ ಚಟ್ಟಿ ರಸ್ತೆ ೨:೪೫
೬. ರಿಚ್‌ಮಂಡ್ ರಸ್ತೆ ೨:೨೬
೭. ಎಂ.ಜಿ.ರಸ್ತೆ ೨:೨೬
೮. ಕಾರ್ಡ್ ರಸ್ತೆ ೨:೫೧
೯. ತುಮಕೂರು ರಸ್ತೆ ೨:೬೨
೧೦. ಸ್ಯಾಂಕಿ ರಸ್ತೆ ೧:೫೨

• ಕಛೇರಿ ವೇಳೆಯಲ್ಲಿ ಸಂಚಾರ ವೇಗದ ಮಿತಿಯು ಗಂಟೆಗೆ ೧೫ ಕಿ.ಮೀ ವೇಗಕ್ಕೆ ಕುಸಿದಿದೆ.
• ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದೇ ಇರುವುದು ಅಥವಾ ನಿಲ್ಲಿಸಲು ಸಾಕಾಗುವಷ್ಟು ಜಾಗದ ಕೊರತೆ
• ಸಾರ್ವಜನಿಕ ಸಾರಿಗೆ ವಾಹನಗಳಿಗೆ ಮೀಸಲಾದ ರಸ್ತೆಯನ್ನು ಖಾಸಗಿ ಉಪಯೋಗಕ್ಕೆ ಬಳಸಿಕೊಳ್ಳುವುದು

ವರ್ಷ ಹಾಲಿ ಚಾಲ್ತಿಯಲ್ಲಿರುವ ಬಸ್‌ಗಳ ಸಂಖ್ಯೆ.
೧೯೯೭ ೧೯೨೧
೨೦೦೦ ೨೧೪೯
೨೦೦೮ ೫೦೭೧
೨೦೦೯  ೫೭೯೨ 
೨೦೧೦  ೬೧೧೩ 

ಬೆಂಗಳೂರು ನಗರದಲ್ಲಿರುವ ವಾಹನಗಳ ಸಂಖ್ಯೆ

ದ್ವಿಚಕ್ರ ವಾಹನಗಳು ಎಲ್.ಎಂ.ವಿ ಅಟೋರಿಕ್ಷಾ ಹೆಚ್.ಟಿ.ವಿ. ಹೆಚ್.ಜಿ.ವಿ. ಇತರೆ ಒಟ್ಟು
೨೮೮೧೭೯೧ ೯೦೩೪೭೮ ೧೧೨೧೫೫ ೯೮೧೯೧ ೪೭೬೮೩ ೧೨೭೭೬೪ ೪೧೭೧೦೬೨

 


ಬೆಂಗಳೂರು ನಗರ ಸಂಚಾರ ಆರಕ್ಷಕರು. © ೨೦೧೩ ಹಕ್ಕು ಕಾಯ್ದಿರಿಸಿದೆ( ಆಲ್ ರೈಟ್ಸ್). ವಿನ್ಯಾಸ ಮತ್ತು ಅಭಿವೃದ್ದಿಪಡಿಸಿದವರು ಸಿ ಎಂ ಎಸ್ ಕಂಪ್ಯೂಟರ್‍ಸ್ ಲಿ.,