You are being Watched - BTP Bangalore Kannada - You are being Watched
BTP - Header
BTP - Left Panel
ನಮ್ಮ ವಿಳಾಸ
ಸಂಚಾರ ಪೂರ್ವ ವಿಭಾಗ
ಸಂಚಾರ ಪಶ್ಚಿಮ ವಿಭಾಗ
ಇತರೆ ಸಂಚಾರ ವೆಬ್ ಸೈಟಗಳ ಬಗ್ಗೆ ಮಾಹಿತಿ
ಸಂಚಾರ ಸಹಾಯವಾಣೆ ಸಂಖ್ಯೆಗಳು
ಉಚಿತ ಕರೆ - ೧೦೯೫
೦೮೦ - ೨೨೯೪೩೦೩೦ / ೩೧೩೧
ಋಗ್ಣ ವಾಹನ (ಅಂಬ್ಯುಲೆನ್ಸ್)
ಉಚಿತ ಕರೆ - ೧೦೫೭೧೧
ಉಚಿತ ಕರೆ - ೧೦೮ / ೧೦೬೨
ನಿಮ್ಮನ್ನು ಗಮನಿಸುತ್ತಿದ್ದಾರೆ

ಇನ್ನೂ ಹೆಚ್ಚು ಕ್ಷಮಿಸಲಾರೆವು - ತಪ್ಪಿಸಿಕೊಳ್ಳುವ ಸಾಹಸ ಮಾಡದಿರಿ

     
ತಪ್ಪಿತಸ್ಥರನ್ನು ತಪಾಸಣೆ ಮಾಡಲು ಕ್ಯಾಮೆರಾ ಹಾಗೂ ಬ್ಲಾಕ್‌ಬೆರಿಗಳ ಬಳಕೆ

ನೊಂದಾಯಿತ ವಾಹನದ ಮಾಲೀಕತ್ವವನ್ನು ವರ್ಗಾಯಿಸದೇ ಇದ್ದಾಗ, ದಂಡ ಪಾವತಿ ಇದ್ದಾಗ, ಕುಡಿದು ವಾಹನ ಚಾಲನೆ ಮಾಡುವುದು, ಕೆಂಪು ಸಂಕೇತವನ್ನು ದಾಟುವುದು ಹಾಗೂ ಅತಿವೇಗವಾಗಿ ಚಾಲನೆ ಮಾಡುವುದು ಮತ್ತೀತರ ಕಾನೂನು ಉಲ್ಲಂಘನೆ ಮಾಡುವವರು ಪೊಲೀಸರು ಅಳವಡಿಸಿಕೊಂಡಿರುವ ತಂತ್ರಜ್ಞಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಹೌದು, ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರವು ಪ್ರತಿನಿತ್ಯ ಪ್ರತಿ ವಾಹನ ಹಾಗೂ ಚಾಲಕನನ್ನು ಕೇಂದ್ರಿ ಕರಿಸುತ್ತದೆ. ಇದರ ಕೆಳಗೆ ಸುಮಾರು ೧೭೫ ಕ್ಯಾಮೆರಾಗಳನ್ನು ವಿವಿಧ ಸಂಚಾರಿ ಸಿಗ್ನಲ್‌ಗಳಲ್ಲಿ ಅಳವಡಿಸಲಾಗಿದೆ. ಪ್ರತಿ ಸಂಚಾರಿ ನಿರ್ವಾಹಕನ ಹತ್ತಿರ ಒಂದೊಂದು ಬ್ಲಾಕ್‌ಬೆರಿ ಇದ್ದು ಇದರ ಸಹಾಯದಿಂದ ವಾಹನದ ಹಾಗೂ ಚಾಲಕನ ವಿವರಗಳನ್ನು ಒಂದು ಬಟನ್ ಒತ್ತಿದ ಕೂಡಲೇ ತಿಳಿಯಬಹುದು

ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆಯು ೧೩ ಇಂಟರ್‌ಸೆಪ್ಪರ್‌ಗಳನ್ನು ಹೊಂದಿದೆ.

ನಿಮ್ಮ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ.

ಪಾಲಿಸದಿದ್ದಲ್ಲಿ ಏನಾಗಬಹುದು ?

೧. ನೀವು ಕೆಂಪು ದೀಪ ಸಂಕೇತದೆಡೆ ವಾಹನ ನಿಲ್ಲಿಸದಿದ್ದಲ್ಲಿ :-

ಹೊಸ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಕೇಂದ್ರಕ್ಕೆ ಸಂಕೇತಗಳನ್ನು ರವಾನಿಸಲು ೫ ಸಂಚಾರಿ ದೀಪಗಳಲ್ಲಿ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿ ಭಾರಿ ಕೆಂಪು ದೀಪವನ್ನು ದಾಟಿದಾಗ ಛಾಯಾಚಿತ್ರ ತೆಗೆದು ಕೇಂದ್ರಕ್ಕೆ ಕಳುಹಿಸುತ್ತದೆ . ಇದು ನಿಮ್ಮ ವಾಹನದ ಸಂಖ್ಯೆ ಹಾಗೂ ನೀವು ಉಲ್ಲಂಘನೆ ಮಾಡಿದ ಬಗ್ಗೆ ಪುರಾವೆಯನ್ನು ಒದಗಿಸುತ್ತದೆ. ಇದರ ಅಧಾರದ ಮೇಲೆ ನಿಮಗೆ ನೋಟಿಸ್ ಕಳುಹಿಸಲಾಗುವುದು. ಈ ರೀತಿ ಪ್ರತಿ ಕಾನೂನು ಉಲ್ಲಂಘನೆಯೂ ಕೇಂದ್ರದಲ್ಲಿ ದಾಖಲಾಗಿರುತ್ತದೆ. ಪದೇ ಪದೇ ಉಲ್ಲಂಘನೆ ಮಾಡುವವರಿಗೆ ದಂಡವನ್ನು ವಿಧಿಸುವ ಜೊತೆಗೆ ಅವರ ವಾಹನ ಪರವಾನಿಗಿಯನ್ನು ರದ್ದುಪಡಿಸಲಾಗುವುದು.

ಇದರ ಜೊತೆಗೆ ಸುಮಾರು ೮೦ ಸರ್‌ವೇಲನ್ಸ್ ಕ್ಯಾಮೆರಾಗಳು ಸಂಚಾರ ಉಲ್ಲಂಘನೆ ಮಾಡುವುದನ್ನು ಗಮನಿಸುತ್ತಿರುತ್ತವೆ.

೨. ಮಧ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಅತಿವೇಗ

ಮಧ್ಯಪಾನ ಮಾಡಿ ಚಾಲನೆ ಮಾಡುವವರ ಮೇಲೆ ಬೆಂಗಳೂರು ನಗರ ಸಂಚಾರ ಪೊಲೀಸರು ನಿಗಾವಹಿಸಿದ್ದಾರೆ. ಒಂದು ವೇಳೆ ಮಧ್ಯಪಾನ ಮಾಡಿ ವಾಹನ ಓಡಿಸುವುದು ಖಚಿತವಾದರೆ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ಹಾಗೂ ನೀವು ನ್ಯಾಯಾಲಯದಲ್ಲಿ ಹಾಜರಾಗಿ ದಂಡ ಪಾವತಿ ಮಾಡಬೇಕಾಗುತ್ತದೆ. ಇದಲ್ಲದೇ ಎನ್‌ಫೋರ್ಸ್‌ಮೆಂಟ್ ಕೇಂದ್ರದಲ್ಲಿ ದಾಖಲಿಸಲಾಗುವುದು. ಈ ವಿವರಗಳನ್ನು ನಿರ್ವಹಕರು ಯಾವುದೇ ಸಮಯದಲ್ಲಿ ಬಳಸಿಕೊಳ್ಳಬಹುದು. ಎಚ್ಚರ ! ಮಧ್ಯಪಾನ ಮಾಡಿ ಚಾಲನೆ ಮಾಡುವುದು ಗಂಭೀರ ಅಪರಾಧವಾಗಿದೆ. ಹಾಗೂ ಇದು ಸೆರೆವಾಸಕ್ಕೂ ಎಡೆಮಾಡಿಕೊಡುತ್ತದೆ. ಇದೇ ನೀತಿ ಅತಿವೇಗದ ಚಾಲನೆಗೂ ಅನ್ವಹಿಸುತ್ತದೆ. ಇದು ಮರುಕಳಿಸದರೆ ದಂಡವನ್ನು ಹೆಚ್ಚಿಸುವುದಲ್ಲದೆ ನಿಮ್ಮ ಚಾಲನ ಪರವಾನಿಗಿಯ ರದ್ದಿತಿಗೆ ಎಡೆ ಮಾಡಿಕೊಡುತ್ತದೆ.

೩.ನೀವು ದಂಡ ಪಾವತಿ ಮಾಡದೇ ಇದ್ದಲ್ಲಿ :-

ಪ್ರತಿ ದಂಡ ವಿಧಿಸಿದ ಬಗ್ಗೆ ಹಾಗೂ ಉಲ್ಲಂಘನೆಗಳನ್ನು ಅಟೋಮೇಷನ್ ಕೇಂದ್ರದಲ್ಲಿ ದಾಖಲಿಸಲಾಗುತ್ತದೆ. ಒಂದು ವೇಳೆ ನೀವು ಎಸೆಗಿದ ಅಪರಾಧಕ್ಕೆ ನಿಗಧಿತ ಸಮಯದಲ್ಲಿ ದಂಡ ಪಾವತಿ ಮಾಡದೆ ಇದ್ದಲ್ಲಿ ಅಧಿಕಾರಿಗಳನ್ನು ಬ್ಲಾಕ್‌ಬೆರಿಗಳ ಮುಖಾಂತರ ಎಚ್ಚರಿಸಲಾಗುವುದು. ಈ ಅಧಿಕಾರಿಗಳು ಎಲ್ಲಿ ಬೇಕಾದರು ನಿಮ್ಮ ವಾಹನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳ ಬಹುದು.

೪.ಒಂದು ವೇಳೆ ವಾಹನ ಮಾಲೀಕತ್ವವನ್ನು ವರ್ಗಾಯಿಸದೇ ಇದ್ದರೆ :-

ವಾಹನವನ್ನು ಮಾರುವ ಹಾಗೂ ಕೊಳ್ಳುವಾಗ ವಾಹನದ ಮಾಲಿಕತ್ವವನ್ನು ವರ್ಗಾಯಿಸದೇ ಇರುವುದು ಕಾನೂನು ಬಾಹಿರ ಇದಲ್ಲದೆ ಯಾವುದೇ ಅಪರಾಧದಲ್ಲಿ ನಿಮ್ಮ ವಾಹನವು ಬಾಗಿಯಾಗಿದ್ದರೆ ನೀವೂ ಸಹ ಅಪರಾಧಿಯಾಗುತ್ತೀರಿ, ಉದಾ:- ಅಪಘಾತ ಮತ್ತು ಉಗ್ರಗಾಮಿ ಚಟುವಟಿಕೆಗಳು.

೪೫ ದಿವಸಗಳ ಒಳಗೆ ನೀವು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಬೇಕು ಹಾಗೂ ವರ್ಗಾವಣೆಯ ಪ್ರತಿಯನ್ನು ಪಡೆಯತಕ್ಕದ್ದು. ಇದು ಮಾರುವವನ ಹಾಗೂ ಕೊಳ್ಳುವವನ ಜವಾಬ್ದಾರಿಯಾಗಿದೆ.

ಇಲ್ಲಿ ದಂಡ ಪಾವತಿಸಿ

ನೀವು ದಂಡವನ್ನು ಯಾವುದೇ ೪೨ ಪೊಲೀಸ್ ಠಾಣೆಗಳಲ್ಲಿ ಅಥವಾ ಮುಖ್ಯ ಕಛೇರಿ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಎಂ.ಜಿ.ರಸ್ತೆ, ಇಲ್ಲಿ ಪಾವತಿಸತಕ್ಕದ್ದು.

ನೀವು ಬೆಂಗಳೂರು ಒಂದು ಕೇಂದ್ರಗಳಲ್ಲಿ ದಂಡವನ್ನು ಪಾವತಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ವಿವರಗಳಿಗೆ ಕ್ಲಿಕ್ ಮಾಡಿ

 


ಬೆಂಗಳೂರು ನಗರ ಸಂಚಾರ ಆರಕ್ಷಕರು. © ೨೦೧೬ ಹಕ್ಕು ಕಾಯ್ದಿರಿಸಿದೆ( ಆಲ್ ರೈಟ್ಸ್). ನಿರ್ವಹಣೆ : ಥೀಮ್ಯಾಟಿಕ್ಸ್ ಐಟಿ ಸಲ್ಯೂಷನ್ಸ್ ಪ್ರೈ. ಲಿ.