ಬೆಂಗಳೂರು ಒನ್ ಕೇಂದ್ರಗಳಲ್ಲಿ ನೀವು ಈಗ ಸುಲಭವಾಗಿ ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡವನ್ನು ಪಾವತಿಸಬಹುದು.
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ೨೦೦೧ ರಿಂದ ಬೆಂಗಳೂರು ನಗರ ಸಂಚಾರಿ ಪೊಲೀಸ್ ( ಬಿಸಿಟಿಪಿ )ಯು ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ( ಇಎಸಿ)ನ್ನು ಅಳವಡಿಸಿದೆ. ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ (ಇಎಸಿ)ನ್ನು ಎಲ್ಲಾ ೩೯ ಪೊಲೀಸ್ ಠಾಣೆಗಳಲ್ಲಿ ಮತ್ತು ೧೪ನೇ ಅಂತಸ್ತು, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಎಂ.ಜಿ.ರಸ್ತೆ, ಬೆಂಗಳೂರು ಇಲ್ಲಿ ಸ್ಥಾಪಿಸಲಾಗಿದೆ
ಮುಖ್ಯ ಕಾರ್ಯಸ್ಥಾನ :
ಮುಖ್ಯ ಕಾರ್ಯಸ್ಥಾನವು ಕೇಂದ್ರಿಯ ಸರ್ವರ್ ಉಪಕರಣವನ್ನು ಹೊಂದಿದೆ, ಮಧ್ಯಭಾಗದ ೮ ಸರ್ವರ್‌ಗಳಿಗೆ ಸಂಧಿಸ್ಥಾನವಾಗಿ ಸಂಪರ್ಕ ಕಲ್ಪಿಸುತ್ತದೆ. ಈ ಮುಖ್ಯ ಕಾರ್ಯಸ್ಥಾನವು ಸಂಚಾರ ಉಲ್ಲಂಘನೆಯ ಬಗ್ಗೆ ಅಂಕಿ ಅಂಶವನ್ನು ವಿವಿಧ ಪೊಲೀಸ್ ಠಾಣೆಗಳಿಂದ ಸಂಗ್ರಹಿಸುತ್ತದೆ. ಮತ್ತು ಅ ವಿಷಯವನ್ನು ಕ್ರೋಡಿಕರಿಸುತ್ತದೆ. ಮತ್ತು ಕ್ರೋಡಿಕರಣಗೊಂಡ ಅಂಕಿ ಅಂಶವನ್ನು ಮತ್ತೆ ಪೊಲೀಸ್ ಠಾಣೆಗಳ "Any Where" ದಂಡ ವಸೂಲಿ ಕೇಂದ್ರಕ್ಕೆ ಕಳುಹಿಸಿಕೊಡುತ್ತದೆ.
ಈ ಜಾರಿಗೊಳಿಸಿದ ಹೊಸ ಪದ್ದತಿಯನ್ನು Automated Enforcement ಎಂದು ಕರೆಯಲಾಗುತ್ತದೆ. ಇದನ್ನು ಬೆಂಗಳೂರುನಗರದಲ್ಲಿ ಅಸ್ಥಿತ್ವಕ್ಕೆ ತರಲಾಗಿದೆ.
• ಇದು ಒಂದು ಪೊಲೀಸ್‌ದಳವನ್ನು ಒಳಗೊಂಡಿರುತ್ತದೆ. ಈ ದಳವು ಸಂಚಾರ ಉಲ್ಲಂಘನೆ ಮಾಡುವ ವಾಹನಗಳ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ ಮತ್ತು ಇದನ್ನು ಅಟೋಮೇಷನ್ ಎನ್‌ಫೋರ್ಸ್‌ಮೆಂಟ್ ಸೆಂಟರ್‌ಗಳಿಗೆ ರವಾನಿಸುತ್ತದೆ. ಇದಕ್ಕೆ ಸಂಬಂಧಿಸಿದ ಕಂಫ್ಯೂಟರ್, ಸಾಪ್ಟ್‌ವೇರ್ ಹಾಗೂ ವಾಹನಗಳನ್ನು ಸಾರಿಗೆ ಇಲಾಖೆಯವರು ನೀಡುತ್ತಾರೆ.
• ಇದರ ಅಧಾರದ ಮೇಲೆ, ಕಂಪ್ಯೂಟರ್ ಚಲನ್‌ಗಳನ್ನು U/s 133 of M.V. Act, ಪ್ರಕಾರ ತಯಾರಿಸಲಾಗುತ್ತದೆ. ಇವುಗಳನ್ನು ಅಂಚೆ ಮೂಲಕ ಸಂಚಾರ ಉಲ್ಲಂಘಿಸಿದವರಿಗೆ ಕಳುಹಿಸಲಾಗುವುದು.
ಬ್ಲಾಕ್‌ಬೆರಿಸ್‌ಯಂತ್ರಗಳ ಮೂಲಕ ಜಾರಿಗೊಳಿಸುವುದುಬೆಂಗಳೂರುನಗರ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ೬೧೨ ಬ್ಲಾಕ್‌ಬೆರಿ ಮತ್ತು ವೈರ್‌ಲೆಸ್ ಪ್ರಿಂಟರ್‍ಸ್‌ಗಳನ್ನು ವಿತ್ತರಿಸಲಾಗಿದೆ.
ಬೆಂಗಳೂರುನಗರ ಸಂಚಾರ ವಿಭಾಗದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಿಂತ ಉನ್ನತ ಮಟ್ಟದ ಅಧಿಕಾರಿಗಳಿಗೆ ಬ್ಲಾಕ್‌ಬೆರಿಯನ್ನು ಬಳಸುವ ಬಗ್ಗೆ ತರಭೇತಿ ನೀಡಲಾಗಿದೆ.
ಅನುಕೂಲಗಳು :• ಸ್ಥಳದಲ್ಲೇ ದಂಡ ವಸೂಲಿ ಮಾಡಿ ರಸೀತಿ ನೀಡಬಹುದು.
• ದಾವೆಗಳನ್ನು ಸರ್ವರ್‌ನಲ್ಲಿ ಸಂಗ್ರಹಿಸಬಹುದು, ಇದರಿಂದ ಪದೇ ಪದೇ ಸಂಚಾರ ಉಲ್ಲಂಘಿಸುವವರನ್ನು ಗುರುತಿಸಲು ಸಾಧ್ಯವಾಗುತ್ತದೆ.
• ಸಂಚಾರ ಉಲ್ಲಂಘನೆ ಮಾಡಿದವರು ನೋಟಿಸ್‌ಗೆ ಸ್ಥಳದಲ್ಲೇ ದಂಡ ನೀಡಲು ಸಾಧ್ಯವಾಗದಿದ್ದರೆ, ಈ ಬಗ್ಗೆ ವಿವರಗಳನ್ನು ಸರ್ವರ್‌ನಲ್ಲಿ ಸಂಗ್ರಹಿಸಬಹುದು.
• ನೋಂದಾಯಿತ ಅಂಕಿ ಅಂಶಗಳನ್ನು ಸಾರಿಗೆ ಇಲಾಖೆಯಿಂದ ಅಟೋಮೇಟಡ್ ಎನ್‌ಫೋರ್ಸ್‌ಮೆಂಟ್ ಸೆಂಟರ್‌ಗೆ ಜೋಡಿಸಲಾಗುವುದು.
• ಪರವಾನಿಗೆ ಅಂಕಿ ಅಂಶಗಳನ್ನು ಪಡೆಯಲಾಗುವುದು.

ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳು • ಟ್ರಾಫಿಕ್ ಸಿಗ್ನಲ್‌ಗಳನ್ನು ಉಲ್ಲಂಘಿಸುವ ಹಾಗೂ ವೇಗ ಮೀತಿ ಮೀರಿ ವಾಹನ ಓಡಿಸುವ ಸವಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ೫ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಸರ್‌ವೇಲನ್ಸ್ (ಕಣ್ಗಾವಲು) ಕ್ಯಾಮೆರಾಗಳ ಮೂಲಕ ಜಾರಿಗೊಳಿಸಲಾಗುವುದು.• ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ನಿಲುಗಡೆ ಮಾಡದ, ಹಳದಿಪಟ್ಟಿ ಉಲ್ಲಂಘಿಸುವುದು ಇತ್ಯಾದಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೋಟಾರ್ ಸವಾರರ ವಿರುದ್ದ ನಿಗಾ ಇಡಲು ೧೭೫ ಸರ್‌ವೇಲನ್ಸ್ ಕ್ಯಾಮಾರ್‌ಗಳನ್ನು ಅಳವಡಿಸಲಾಗಿದೆ.

ಚಾಲಿತ ಜಾರಿ(ಎನ್‌ಪೋರ್‍ಸ್‌ಮೆಂಟ್)/ಕಣ್ಗಾವಲು• ಬೆಂಗಳೂರು ನಗರದ ಎಲ್ಲಾ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸರ್‌ವೇಲನ್ಸ್ ಕ್ಯಾಮೆರಾಗಳನ್ನು ಇನ್ನೂ ಅಳವಡಿಸಲು ಸಾಧ್ಯವಾಗಿಲ್ಲ. ಸಂಚಾರಿ ಪೊಲೀಸರು ೯ ಇಂಟರ್‌ಸೆಪ್ಟರ್ ವಾಹನಗಳನ್ನು ಕರ್ತವ್ಯಕ್ಕೆ ನಿಯೋಜಿಸಿದ್ದು, ಅದಷ್ಟು ಬೇಗ ಇನ್ನೂ ೬ ಇಂಟರ್‌ಸೆಪ್ಪರ್ ವಾಹನಗಳನ್ನು ನಿಯೋಜಿಸಲಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಿಸುವವರನ್ನೊಳಗೊಂಡು ಎಲ್ಲಾ ತರಹದ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಕೇಸುಗಳನ್ನು ದಾಖಲಿಸುವ ಸಾಮರ್ಥ್ಯ ಇಂಟರ್ ಸೆಪ್ಟರ್ ವಾಹನಕ್ಕಿದೆ.